ಗೆಳೆಯರು ಮೊನ್ನೆ ಫೋನ್ ಮಾಡಿ - " ಲೋ ಬೇಗ ಮದ್ವೆ ಆಗು, ಬ್ಯಾಚಲರ್ ಆಗಿ ಟಿಕೆಟ್ ತೊಗೋಬೇಡ,ಸ್ವಲ್ಪ ದಿನ ಆದರು ಜೀವನ ಅನುಭವಿಸು" ಅಂತಾ ಲೆಕ್ಚರ್ ಕೊಡೋಕ್ ಶುರು ಮಾಡಿದ್ರು. ನಾನ್ ರೇಗಿ 'ಯಾಕ್ರೋ ಒಳ್ಳೆ ಮೆಂಟಲ್ ತರಹ ಏನೇನೊ ಮಾತಾಡತಿದ್ದರಾ?' - ಕೇಳಿದ್ರೆ ಹೇಳ್ತಾರೆ - " ಮಗಾ ೨೦೧೨ ಡಿಸೆಂಬರ್ ೨೧ಕ್ಕೆ ಪ್ರಳಯವಾಗಿ ಭೂಮಿ ಮಟಾಶ್ ಆಗುತ್ತೆ, ಬೇಕಾದರೆ ನೆಟ್ ಸರ್ಚ್ ಮಾಡು ನಿಂಗ ಎಲ್ಲಾ ಗೊತ್ತಾಗುತ್ತೆ..." ಅಂತಾ ಹೇಳಿ; ಆಮೇಲೆ ಸ್ವಲ್ಪ ಅವರ-ಅವರ ಮದ್ವೆ ವಿಷಯ ಹೇಳಿ, 'ಮಗಾ ಯಾವದೋ ಕಾಲ್ ಬರ್ತಾ ಇದೆ ಆಮೇಲೆ ಕಾಲ್ ಮಾಡ್ತೀನಿ' ಅಂತಾ ಹೇಳಿ ಕರೆ ಮುಗೀತು.
ಛೇ!! ಇದೇನ ಗ್ರಹಚಾರ ಅಂತಾ ನೆಟ್ ಸರ್ಚ್ ಮಾಡಿದ್ರೆ - ಮಾಯನ್ ಕ್ಯಾಲೆಂಡರ್ ಪ್ರಕಾರ, ಭೂಮಿ ೨೦೧೨ ಡಿಸೆಂಬರ್ ೨೦ಕ್ಕೆ ಉಳಿಯೋಲ್ಲ ಅಂತಾ ಗೊತ್ತಾಯಿತು. ಆಮೇಲೇನೋ ಮೀಟಿಂಗ್ ಇತ್ತು, ಮೀಟಿಂಗ್ ಮುಗಿಸಿ ಸ್ನ್ಯಾಕ್ಕ್ಸ್ ತಿನ್ನುತಾ, ಆಫೀಸ್ಗೆ ಬಂದ ಹೊಸ ಹುಡುಗಿ ತೋರಿಸ್ದ್ರು ಹುಡಗರು. ಅವಳ ಬಗ್ಗೆನೆ ಇತ್ತು ಡಿಸ್ಕಶನ್ ತಿಂಡಿ ಮುಗಿಯೋವರೆಗೂ. ನಂಗ ಮಾತ್ರ, ತೆಲೆಯಲ್ಲಿ ಅದೇ ಮಾಯನ್ ಕ್ಯಾಲೆಂಡರ್ ವಿಷಯ ಇತ್ತು. ರೂಮ್ಗೆ ಬಂದು ಟಿವಿ ಹಾಕಿದ್ರೆ, ಶುರು ಆಗಿತ್ತು ಭೂಮಿ ಸಾಯೋ ಬಗ್ಗೆ ಡಿಸ್ಕಶನ್. ಸ್ವಲ್ಪ ಹೊತ್ತು ಕೇಳ್ದೆ; ಆಮೇಲೆ ಬೋರ್ ಆಯ್ತು.
ಉದಯ ಟಿವಿ ಹಾಕೋಣ ಅಂತಾ ರಿಮೋಟ್ ಎತ್ತಿದರೆ, ಮೊಬೈಲ್ - "ಅನಿಸುತಿದೆ ಯಾಕೋ ಇಂದು..." ಅಂತಾ ಕೂಗೋಕ ಶುರುಮಾಡ್ತು. ಅಪ್ಪ ಫೋನ್ ಮಾಡಿದ್ರು. ಕಾಲ್ ರಿಸಿವ್ ಮಾಡಿ, ಸ್ವಲ್ಪ ಮನೆ ವಿಷಯ, ಕೆಲಸದ ವಿಷಯ, ನಾನ್ ಊರಿಗೆ ಹೋಗೋ ವಿಷಯ ಮಾತಾಡಿ ಫೋನಿಟ್ಟ ಮೇಲೆ, ಆ ಪ್ರಳಯ ಮಾಯವಾಗಿತ್ತು ಮನಸ್ಸಿನಿಂದ.
ಆಮೇಲೆ ಅನಸ್ತು - ಜೀವನಾನೆ ಕ್ಷಣಿಕ, ಯಾ ಬಡ್ಡಿ ಮಗಂಗೆ ಗೊತ್ತು..ಅವನೇ ನಾಳೆ ಇರ್ತನೋ ಇಲ್ಲಾ ಅಂತಾ..ಇರೋ ಅಷ್ಟ ದಿನ ಜೀವನ್ಮುಖಿಯಾಗಿ ಇರೋಣ. ಓಶೋ ಹೇಳಿದಹಂಗೆ - ಸೆಲೆಬ್ರಶನ್ ಶುಲ್ದ್ ಬಿ ದಿ ವಿ ಆಫ್ ಲೈಫ್. ಕಷ್ಟಬರಲಿ, ಸುಖಬರಲಿ, ನಾವ್ ನಮ್ಮ ಮಜದಲ್ಲಿರೋಣ. ಏನಂತೀರಾ??
Thursday, October 29, 2009
Subscribe to:
Posts (Atom)