ಈ ವರ್ಷ ನನ್ನ ಅತಿ ದೊಡ್ಡ ಸಾಧನೆ ಅಂದ್ರೆ - ಭೈರಪ್ಪನವರ ಕಾದಂಬರಿಗಳನ್ನ ಓದಿದ್ದು.
ಓದಬೇಕಾಗಿರೋದು - ದಾಟು, ಮಂದ್ರ ಮತ್ತು ಅಂಚು ಮಾತ್ರ.
ಹೋದ ವರ್ಷ ಬಸವಕಲ್ಯಾಣಕ್ಕೆ ಹೋದಾಗ ಮನೆಯರೆಲ್ಲಾ ಕಾಯಿ-ಕರ್ಪೂರ
ಅದು-ಇದು ಅಂತ ತಮ್ಮ ಖರೀದಿ ನಡಸಿದ್ರು. ನಾನ ಏನ ಮಾಡೋದು ಇಲ್ಲಿ
ಅಪ್ಪ ಅಮ್ಮ ಎಲ್ಲಾ ಪೂಜಾ ಸಾಮಗ್ರಿ ಖರೀದಿ ಮಾಡ್ತಿದ್ರು. ಸುಮ್ನೆ ಹಾಗೆ ಒಂದ
ಸುತ್ತ ಹಾಕೋಣ ಬಸವಣ್ಣನವರ ವಚನಗಳ ಪುಸ್ತಕನಾದ್ರೂ ಕೊಳೋಣ ಅಂತಾ
ಪುಸ್ತಕದ ಅಂಗಡಿ ಹೊಕ್ಕೆ.
ಹಾಗೆ ಇರೋ ಪುಸ್ತಕಗಳ ಮೇಲೆ ಕಣ್ಣ ಹಾಯಿಸಿದರೆ - "ಬಸವಣ್ಣನವರ
ವಚನಗಳು" ಮತ್ತು ಭೈರಪ್ಪನವರ "ನಿರಾಕರಣ" ಕೊಳೊಂದೆಂದು ತೀರ್ಮಾನ
ವಾಯ್ತು. ದೇವರ ದರ್ಶನ ಹಾಗು ಬಸವಣ್ಣನವರು ಐಕ್ಯವಾಗಿರೋ ಸ್ಥಳ ನೋಡಿ
ಊರಿಗೆ ಹೊರಡೋ ಸಮಯದಲ್ಲಿ 'ನಿರಾಕರಣ' ಓದೋಕೆ ಶುರುಮಾಡಿದೆ.
ಹಾಗೆ ವೈರಸ್ ತರಹ ಓದ್ತಾ ಹೋದೆ, ಮರುದಿನ ನಮ್ಮ ಊರಿನಿಂದ ಚೆನ್ನೈಗೆ
ಬರೋ ಹೊತ್ತಿನಲ್ಲಿ 'ನಿರಾಕರಣ' ಮುಗಿದಿತ್ತು.
'ನಿರಾಕರಣ'ದ ವಿಷಯ ತುಂಬಾ ಹಿಡಸ್ತು, ನನ್ನ ಕೆಲವು ಭಾವನೆಗಳ ಬಗ್ಗೆ
ವಿಚಾರ ಮಾಡೋಕ್ಹಸ್ತು. ಆಮೇಲೆ ಪ್ರತಿ ಸಾರಿ ಬೆಂಗಳೂರಿಗೆ ಹೋದಾಗ
ಕಾಮತ ಹೋಟೆಲ್ನ ಜೋಳದ ರೊಟ್ಟಿ ಊಟ ಮತ್ತು ಭೈರಪ್ಪನವರ ಕಾದಂಬರಿ
ಗಳ ಖರೀದಿ ಖಾಯಂವಾಯ್ತು.
ಭೈರಪ್ಪನವರ ಎಲ್ಲಾ ಕಾದಂಬರಿಯಲ್ಲಿ ನಂಗೆ ಇಷ್ಟವಿರೋ ಸಾಲುಗಳಿವೆ.
ಅವುಗಳ ಪಟ್ಟಿ ಮಾಡೋಣ ಅಂತ ಒಂದ ಯೋಚನೆ ಮಾಡೋಣಾಂತ ಇತ್ತೀಚಿಗೆ
'ಸಾರ್ಥ' ಓದುವಾಗ್ ಹೊಳಿತು.
'ಸಾರ್ಥ'ದಿಂದ ನನ್ನ ಮೆಚ್ಚಿನ ಸಾಲುಗಳು, ನಿಮಗೂ ಹಿಡಸಬಹುದು-
-------------------------------------------------------------------------
೧. ದುಃಖ ನೋವಿಗಿಂತಲೂ ದೊಡ್ಡದು. ಯಾಕಂದ್ರೆ, ನೋವು ಇಂದ್ರಿಯಗಳಿಗೆ
ಸಿಮೀತವಾಗಿದ್ದು. ದುಃಖ ಬುದ್ಧಿ, ಮನಸಿಗ್ಗೆ ಸಂಭದಪಟ್ಟದ್ದು.
೨. ಮತಿ ಅಂದ್ರೆ ಬುದ್ಧಿ. ಬುದ್ಧಿಯ ಗ್ರಹಿಕೆಯೇ ಮತ. ಪ್ರಪಂಚದಲ್ಲಿ ಎಷ್ಟು
ಜನರಿದ್ದಾರೋ ಅಷ್ಟು ಬುದ್ಧಿಗಳಿವೆ. ಅಷ್ಟು ಗ್ರಹಿಕೆಗಳಿವೆ. ಅಷ್ಟು ಮತಗಳಿರುತ್ತವೆ.
೩. ದೇವರಿಗಿಂತ ಸ್ವತಂತ್ರ ದೊಡ್ಡದು.
೩. ಮನಸ್ಸು ನಮ್ಮ ಸಂಕಟದ ಕರೆಗೆ ಒಗೂಡುವ ಒಂದು ಶಕ್ತಿಯುನ್ಟೆಂಬ
ಶ್ರದ್ಧೆಯನ್ನವಲಂಬಿಸಿದೆ .
೪. ಕೃಷ್ಣ ಯೋಗಿ. ಸನ್ಯಾಸಿಯಲ್ಲ.
೫. ಅವಳ ಕಣ್ಣಗಳು ದಾರಿಯ ಕಡೆಗಿದ್ದರೂ ದ್ರಷ್ಟಿ ಶೂನ್ಯದಲ್ಲಿತ್ತು.
೬. ವೀರ ಶೂರ ತಂತ್ರ ತ್ಯಾಗ ಯೋಗ ಶ್ರಂಗಾರ ಲೌಕಿಕ ಪಾರಮಾರ್ಥಿಕ
ಪ್ರವ್ರತ್ತಿ ನಿವ್ರತ್ತಿ ವೈರಾಗ್ಯ ಕರ್ಮ ನಿಷ್ಕಾಮಕರ್ಮ ಎಷ್ಟೂಂದು ಸಂಕೀರ್ಣ
ವಾಹಿನಿಗಳ ಸೆಲೆ ಅವನು! ಕೃಷ್ಣ.
'ತಬ್ಬಲಿ ನೀನಾದೆ ಮಗನೆ'ದಿಂದ ನೆನಪಿರೋ ಈ ಸಾಲು
1. ಅವನಿಗೆ ಇಂತಹ ಧೈರ್ಯ, ಸಂಕಲ್ಪವೆಲ್ಲಿಂದ ಬಂದಿದೆ? ಅವನಿಗಿರೋ ನಂಬಿಕೆ
ಮತ್ತು ಶ್ರದ್ದೆಯಿಂದರಬೇಕು.
'ಮಭಾಭಾರತ'ದಿಂದ
----------------------
ಪಾಂಡವರು, ಕೃಷ್ಣ ಮತ್ತು ಅವರ ಹಿತೈಷಿಗಳು ಕೌರವರ ಮೇಲೆ ಯುದ್ಧ ಸಾರೋ
ಬಗ್ಗೆ ಚಿಂತನೆ ನಡಿಸೋವಾಗ, ಕೃಷ್ಣ 'ಸಂಧಾನ'ಮಾರ್ಗ ಪ್ರಸ್ತಾಪಪಿಸುತ್ತಾನೆ.
ಆಗ -
೧.
ಭೀಮ - ನಾನು ದ್ರೌಪದಿಗೆ ಕೊಟ್ಟ ಮಾತು ಮರತೇನು ಕೃಷ್ಣ? ಆ ದುಶ್ಯಾಸನ
ಎದೆ ಹಿರಿ ಅವನ ರಕ್ತ ತಂದು ದ್ರೌಪದಿಯ ಮುಡಿಗೆ ಹಚ್ಚದಿದ್ದರೆ ನಾನು
ಪಾಂಡುಪುತ್ರ ಭೀಮನಲ್ಲ.
ಕೃಷ್ಣ - ಮನುಕುಲದ ಶಾಂತಿಗಿಂತ ನಿನ್ನ ಮಾತೆ ದೊಡ್ಡದಾ?
ಕೃಷ್ಣ ಕುರುಕ್ಷೇತ್ರ ಯುದ್ಧ ತಡಿಯೋಕೆ ಹಲವು ಪ್ರಯತ್ನ ಮಾಡಿದ್ರು, ದುರ್ಯೋದನ
ಯಾವುದಕ್ಕೂ ಒಪ್ಪೋಲ್ಲ. ಕೊನೆಗೆ ಯುದ್ಧವಾಗುತ್ತೆ.
ಯುದ್ಧಮಾಡು ಎಂದು ಬೋಧಿಸದರೂ, ಕೃಷ್ಣ ಶಾಂತಿಪ್ರೀಯ.
೨. ತನ್ನ ಸ್ವಾರ್ಥಕ್ಕಾಗಿ ಮಾಡುವ ಆಕ್ರಮಣ ನ್ಯಾಯವಾದದ್ದಲ್ಲ.
Sunday, November 22, 2009
Subscribe to:
Posts (Atom)